Thursday , September 19 2024
Breaking News
Home / Breaking News (page 35)

Breaking News

ಮುದಗಲ್ : ಪುರಸಭೆ ಮುಖ್ಯಾಧಿಕಾರಿ ಮರಿಲಿಂಗಪ್ಪ  ವರ್ಗಾವಣೆ 

ನಾಗರಾಜ್ ಎಸ್ ಮಡಿವಾಳರ ಮುದಗಲ್ : ಮುದಗಲ್ ಪುರಸಭೆ ಮುಖ್ಯಧಿಕಾರಿ ಮರಿಲಿಂಗಪ್ಪ ರನ್ನ ವರ್ಗಾವಣೆ ಮಾಡಿ ಸರಕಾರ ಆದೇಶ ಹೊರಡಿಸಿದೆ. ಮರಿಲಿಂಗಪ್ಪ ರವರ ಜಾಗಕ್ಕೆ ಸಾರ್ವಜನಿಕ ಹಾಗೂ ಆಡಳಿತಾತ್ಮಕ ಹಿತ ದೃಷ್ಟಿಯಿಂದ ಮುದಗಲ್ ಪುರಸಭೆಗೆ ಮುಖ್ಯಾಧಿಕಾರಿಯಾಗಿ ಕುರಗೋಡು ಪುರಸಭೆಯ ಹಿರಿಯ ಆರೋಗ್ಯ ನಿರೀಕ್ಷಕ ಪರಶುರಾಮ ರವರನ್ನ ನೇಮಿಸಿ ತಕ್ಷಣದಿಂದ ಜಾರಿಗೆ ಬರುವಂತೆ ದಿ 27.10.2022ರಂದು ನಗರಾಭಿವೃದ್ಧಿ ಇಲಾಖೆಯ ಸರಕಾರದ ಅಧೀನ ಕಾರ್ಯದರ್ಶಿ ಟಿ ಮಂಜುನಾಥ್  ಆದೇಶ ಹೊರಡಿಸಿದ್ದಾರೆ.

Read More »

ತಾವರಗೇರಾ: ಶಂಕುಸ್ಥಾಪನೆ ಸಮಾರಂಭಕ್ಕೆ, ಇಂದು ಸಚಿವರ ಆಗಮನ..!

ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ಪಟ್ಟಣಕ್ಕಿಂದು ಸಚಿವರ ದಂಡೇ ಆಗಮಿಸುತ್ತಿದ್ದು ಪಟ್ಟಣದ ಬಹುದಿನಗಳ ಬೇಡಿಕೆ ಯಾಗಿದ್ದ ತುಂಗಭದ್ರಾ ಎಡದಂಡೆ ಕಾಲುವೆಯಿಂದ ನೀರು ಸರಬರಾಜು ಕಲ್ಪಿಸುವ ಕಾಮಗಾರಿಗಳ ಶಂಕುಸ್ಥಾಪನೆ ಸಮಾರಂಭಕ್ಕೆ ಪ್ರವಾಸೋದ್ಯಮ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆನಂದ ಸಿಂಗ್, ನಗರಾಭಿವೃದ್ಧಿ ಸಚಿವರಾದ ಬೈರತಿ ಬಸವರಾಜ, ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧ್ಯಕ್ಷ ರಾದ ರಾಜು ಗೌಡ ಆಗಮಿಸಲ್ಲಿದ್ದು, ಸ್ಥಳೀಯ ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರ …

Read More »

ಟ್ರ್ಯಾಕ್ಟರ್ ಪಲ್ಟಿ ನಾಲ್ವರ ಸಾವು..!

ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ಸಮೀಪದ ನವಲಿ ಗ್ರಾಮದ ರೈಸ್ ಟೆಕ್ನಾಲಜಿ ಪಾರ್ಕ ಬಳಿ ಟ್ರ್ಯಾಕ್ಟರವೊಂದು ಪಲ್ಟಿಯಾಗಿ ನಾಲ್ವರು ಮೃತಪಟ್ಟಿರುವ ಘಟನೆ ಜರುಗಿದೆ..! ಮೃತರನ್ನು ಕಾರಟಗಿ ಪಟ್ಟಣದ ಇಂದಿರಾ ನಗರದ ನಿವಾಸಿಗಳಾದ ಯಮನೂರಪ್ಪ ಸಿಂಧನೂರು (55), ಅಂಬಮ್ಮ (45) ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ದ್ಯಾವಮ್ಮ (60) ಶೇಶಪ್ಪ ಬಂಡಿ (40) ಇವರಿಬ್ಬರು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಮೃತರು ಕೊಪ್ಪಳ ಜಿಲ್ಲೆಯ ಕಾರಟಗಿ ಪಟ್ಟಣದ ಇಂದಿರಾನಗರದ ನಿವಾಸಿಗಳು ಎಂದು ತಿಳಿದುಬಂದಿದೆ. ಕಾರಟಗಿಯಿಂದ ಕನಕಗಿರಿ …

Read More »

ಒಂದೇ ಬೈಕ್ ನಲ್ಲಿ ಈಡೀ ಸಂಸಾರವೇ ಸವಾರಿ..!

ವರದಿ ಎನ್ ಶಾಮೀದ್ ತಾವರಗೇರಾ ಕೊಪ್ಪಳ: ಬೈಕ್ ಸವಾರನೊಬ್ಬ ತನ್ನ ಕುಟುಂಬದ 8 ಸದಸ್ಯರನ್ನು ಸೇರಿ‌, 9 ಜನರು ಒಂದೇ ಬೈಕ‌ನಲ್ಲಿ ಸವಾರಿ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಗಿಣಗೇರಾದಿಂದ ಗಂಗಾವತಿ ಕಡೆಗೆ ಹೊಂಟಿದ್ದ ಕುಟುಂಬ ಸದಸ್ಯರು ಹಿರೋ ಹೋಂಡಾ ಸ್ಪೇಂಡರ್ ಬೈಕನಲ್ಲಿ 9 ಜನ ಸವಾರಿ ಮಾಡುತ್ತಿರುವುದನ್ನು ಸ್ಥಳೀಯ ರು ವಿಡಿಯೋ ಮಾಡಿ ರುವುದು ಅದರಲ್ಲಿ ಇಬ್ಬರೂ ದಂಪತಿಗಳು ಹಾಗೂ ಅವರ 5 ಜನ ಮಕ್ಕಳು …

Read More »

ಬಿಜೆಪಿ ಕಾರ್ಯಕರ್ತರಿಂದ ವಿಜಯೋತ್ಸವ ಆಚರಣೆ..!

ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ಪಂಚ ರಾಜ್ಯ ಚುನಾವಣೆಯಲ್ಲಿ ಬಿಜೆಪಿ ಪಕ್ಷವು ಜಯಭೇರಿ ಬಾರಿಸಿದ ಹಿನ್ನಲೆಯಲ್ಲಿ ಸ್ಥಳೀಯ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚುವ ಮೂಲಕ ವಿಜಯೋತ್ಸವ ಆಚರಿಸಿದ್ದು ಪಟ್ಟಣದಲ್ಲಿ ಕಂಡು ಬಂತು. ಈ ಸಂದರ್ಭದಲ್ಲಿ ಕುಷ್ಟಗಿ ಮಂಡಲ ಪ್ರಧಾನ ಕಾರ್ಯದರ್ಶಿ ಮಂಜುನಾಥ ಜೂಲಕುಂಟಿ, ಪಪಂ ಸದಸ್ಯರಾದ ಬಸನಗೌಡ ಓಲಿ, ದಶರಥ ಸಿಂಗ್, ಹಾಗೂ ಮುಖಂಡ ರಾದ ಚನ್ನಪ್ಪ ಸಜ್ಜನ, ರಂಗಪ್ಪ ಉಪ್ಪಾರ, ಮಂಜುನಾಥ ರಾಂಪೂರ, ಶಿವರಾಜ …

Read More »

3ದಿನಗಳ ಕಾಲ ಸಾಮಾಜಿಕ ನಾಟಕ ಪ್ರದರ್ಶನ : ಅಶೋಕಗೌಡ  ಪಾಟೀಲ್

ನಾಗರಾಜ್ ಎಸ್ ಮಡಿವಾಳರ್ ಮುದಗಲ್ :   ಮೂರು ದಿನಗಳಕಾಲ ಸಾಮಾಜಿಕ ನಾಟಕ ಪ್ರದರ್ಶನ ನಡೆಯಲಿದೆ ಎಂದು ಮಾಜಿ ಪುರಸಭೆ ಅಧ್ಯಕ್ಷ ಅಶೋಕಗೌಡ ಪಾಟೀಲ್ ಹೇಳಿದರು.  ಪಟ್ಟಣದಲ್ಲಿ  ಪತ್ರಿಕೆಯೊಂದಿಗೆ ಮಾತನಾಡಿದ ಅವರು ಮುದಗಲ್ ಪಟ್ಟಣದ ಅಶೋಕಗೌಡ ಕಾಲೋನಿ ಆವರಣದಲ್ಲಿ ಸುರೇಂದ್ರ ಗೌಡ ಹಾಗೂ ಮುದಗಲ್ ಗೆಳೆಯರ ಬಳಗದವರ ಸಹಯೋಗದಲ್ಲಿ ಶಿವಸಂಚಾರ ಸಾಣೆಹಳ್ಳಿ ತಂಡದಿಂದ ಇದೆ 11ರಂದು  ಒಕ್ಕಲಿಗ ಮುದ್ದಣ್ಣ,12 ರಂದು  ಗಡಿಯಂಕ ಕುಡಿಮುದ್ದ, 13  ರಂದು ಬಸ್ ಕಂಡಕ್ಟರ ಎಂಬುವ ಸಾಮಾಜಿಕ …

Read More »

ಗ್ರಾಪಂ ಸದಸ್ಯನ ಕಾಮದಾಟಕ್ಕೆ ಬಲಿಯಾದ ಯುವಕನ ಶವ ಪತ್ತೆ..!

ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ಅನೈತಿಕ ಸಂಬಂಧ ಹಿನ್ನಲೆಯಲ್ಲಿ ಗ್ರಾ ಪಂ ಸದಸ್ಯನೊಂದಿಗೆ ಸಂಬಂಧ ಹೊಂದಿದ್ದ ತಾಯಿಯೊಬ್ಬಳು ತನ್ನ ಮಗನ ಜೊತೆ ಸೇರಿ, ಇನ್ನೊಬ್ಬ ಮಗನನ್ನು ಕೊಲೆ ಮಾಡಿದ ಅಮಾನವೀಯ ಘಟನೆಗೆ ಸಂಬಂಧಿಸಿದಂತೆ ಕೊಪ್ಪಳ ಪೊಲೀಸ್ ತಂಡವೂ ಪ್ರಕರಣ ವನ್ನು ಶೀಘ್ರವೇ ಪತ್ತೆ ಹಚ್ಚಿ ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾಗಿದ್ದು, ಕೊಲೆ ಮಾಡಿ ಹೊಲದಲ್ಲಿ ಮುಚ್ಚಿ ಹಾಕಿದ್ದ ಮೃತ ದೇಹ ವನ್ನು ಶನಿವಾರದಂದು ಹೊರ ತೆಗೆಯುವ ಮೂಲಕ ಪ್ರಕರಣವನ್ನು ಸಾಬೀತು …

Read More »

ಮುದಗಲ್ : ನಾಳೆ ಶಿವಾಜಿ ಜಯಂತಿ 

ನಾಗರಾಜ್ ಎಸ್ ಮಡಿವಾಳರ ಮುದಗಲ್ :  ಪಟ್ಟಣದಲ್ಲಿ ಶುಕ್ರವಾರ ಶಿವಾಜಿ ಜಯಂತಿ ಆಚರಣೆ ಮಾಡಲಾಗುವುದು ಎಂದು ಪುರಸಭೆ ಸದಸ್ಯ ಗುಂಡಪ್ಪ ಗಂಗಾವತಿ ಹೇಳಿದರು. ಪಟ್ಟಣದ ಶ್ರೀ ಶರಣಮ್ಮ ಮಾತೇ ಗೋ ಶಾಲೆಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ನಗರದ  ಚಾವಡಿಕಟ್ಟಿ ಯಿಂದ  ಶಿವಾಜಿಮಹಾರಾಜರ ಫೋಟೋ ಮೆರವಣಿಗೆಗೆ ಮಾಜಿ ಸೈನಿಕ ಪಂಪಣ್ಣ ಜಾವುರ ಚಾಲನೆ ನೀಡಲಿದ್ದಾರೆ  ನಂತರ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆಸಾಗಿ  ಶ್ರೀ ನಗರೇಶ್ವರ ದೇವಸ್ಥಾನದ ವೇದಿಕೆ ತಲುಪಲಿದೆ.  ಸಾರ್ವಜನಿಕರು …

Read More »

ತಾವರಗೇರಾ: ಕಾಮದಾಸೆಗಾಗಿ ಪ್ರಿಯಕರನೊಂದಿಗೆ ಸೇರಿ, ಹೆತ್ತ ಮಗನನ್ನೆ ಕೊಂದ ಪಾಪಿ ತಾಯಿ..!

ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ಅನೈತಿಕ ಸಂಬಂಧದ ಹಿನ್ನಲೆಯಲ್ಲಿ ತನ್ನ ಕಾಮದಾಸೆಯನ್ನು ತೀರಿಸಿಕೊಳ್ಳಲು ತಾಯಿಯೊಬ್ಬಳು ಪ್ರಿಯಕರ (ಹಾಲಿ ಗ್ರಾಪಂ ಸದಸ್ಯ) ಹಾಗೂ ಮಗನ ಜೊತೆ ಸೇರಿ ಇನ್ನೊಬ್ಬ ಮಗನನ್ನು ಕೊಲೆ‌ ಮಾಡಿದ ಅಮಾನವೀಯ ಘಟನೆ ನಡೆದಿದ್ದು. ಇಂತಹ ನೀಚ ತಾಯಿಯು ಇರುತ್ತಾಳೆ ಎಂಬುದು ನಂಬಲು ಅಸಾಧ್ಯವಾದರು, ನಂಬಲೆಬೇಕಾದ ಘಟನೆ ಸಮೀಪದ ಮ್ಯಾದರಡೊಕ್ಕಿ ಗ್ರಾಮದಲ್ಲಿ ನಡೆದಿದೆ. ಘಟನೆಯ ವಿವರ: ಕೊಲೆಯಾದ ವ್ಯಕ್ತಿ ಮ್ಯಾದರ ಡೊಕ್ಕಿ ಗ್ರಾಮದ ಬಸವರಾಜ ಶರಣಪ್ಪ ದೋಟಿಹಾಳ …

Read More »

ನಾಗರಹಾಳ ಮೂಲ ಸೌಲಭ್ಯದ ಕೊರತೆ ಪರೀಕ್ಷೆ ಕೇಂದ್ರದಿಂದ ವಂಚಿತ ?

  ನಾಗರಾಜ್ ಎಸ್ ಮಡಿವಾಳರ ಮುದಗಲ್: ಸಮೀಪದ ನಾಗರಹಾಳ ಗ್ರಾಮಕ್ಕೆ ಪದವಿ ಪೂರ್ವ ಪರೀಕ್ಷೆ ನೀಡಲು ಮೂಲ ಸೌಲಭ್ಯದ ಕೊರತಯಿಂದಾಗಿ ನಾಗರಹಾಳ ಗ್ರಾಮ ಹಾಗೂ ಸುತ್ತಲಿನ ವಿದ್ಯಾರ್ಥಿಗಳು ಪರೀಕ್ಷೆ ಕೇಂದ್ರದಿಂದ ವಂಚಿತರಾಗಬಹುದೇ? ಪಿಯುಸಿ ಪರೀಕ್ಷೆ ಕೇಂದ್ರ ನೀಡುವುದಕ್ಕೆ ಮುಖ್ಯವಾಗಿ ಬೇಕಾಗಿರುವುದು ಪರೀಕ್ಷೆ ಕೇಂದ್ರ ಇರುವಲ್ಲಿ ಪೊಲೀಸ್ ಠಾಣೆ ಇರಬೇಕು. ಇದು ಅಲ್ಲದೇ ಮುಖ್ಯ ಅಂಚೆ ಕಚೇರಿ ಇರಬೇಕು. ಇವುಗಳು ಇಲದ ಕಾರಣದಿಂದಾಗಿ ನಾಗರಹಾಳ ಗ್ರಾಮದಲ್ಲಿ ನೂತನ ಪರೀಕ್ಷೆ ಕೇಂದ್ರ ನೀಡುವುದು …

Read More »
error: Content is protected !!