Wednesday , October 23 2024
Breaking News
Home / N Shameed (page 56)

N Shameed

ಕವಿ ಅಲ್ಲಾಗಿರಿರಾಜ್ ಕನಕಗಿರಿ ಅವರ ‘ಸರ್ಕಾರ ರೊಕ್ಕ ಮುದ್ರಿಸಬಹುದು ತುಂಡು ರೊಟ್ಟಿಯನ್ನಲ್ಲ’ ಕವನ ಸಂಕಲನ ಲೋಕಾರ್ಪಣೆ

  ಎನ್ ಶಾಮೀದ್ ತಾವರಗೇರಾ ಗ್ರಾಮಗಳು ಹಸಿವಿನಿಂದ ತತ್ತರಿಸುತ್ತಿವೆ. ಕವಿಯ ಕಾವ್ಯವು ಗ್ರಾಮೀಣ ನೋವಿಗೂ ಸ್ಪಂದಿಸಬೇಕು ಎಂದು ಹಿರಿಯ ಗಾಂಧಿವಾದಿ ಹಾಗೂ ರಂಗಕರ್ಮಿ ಪ್ರಸನ್ನ ಅವರು ಸಲಹೆ ನೀಡಿದರು. ಸ್ಲಂ ಜನಾಂದೋಲನ (ಕರ್ನಾಟಕ) 11ನೇ ವಾರ್ಷಿಕೋತ್ಸವ ಅಂಗವಾಗಿ ‘ಸಾವಿತ್ರಿಬಾಯಿ ಫುಲೆ ಜಯಂತಿ ಹಾಗೂ ನಗರ ವಂಚಿತ ಸಮುದಾಯಗಳ ಮುಂದಿನ ಹೆಜ್ಜೆಗಳ ಕುರಿತು’ ಆಯೋಜಿಸಿದ್ದ ಸಮಾರಂಭದಲ್ಲಿ ಕವಿ ಅಲ್ಲಾಗಿರಿರಾಜ್ ಕನಕಗಿರಿ ಅವರ ‘ಸರ್ಕಾರ ರೊಕ್ಕ ಮುದ್ರಿಸಬಹುದು ತುಂಡು ರೊಟ್ಟಿಯನ್ನಲ್ಲ’ ಕವನ ಸಂಕಲನ …

Read More »

ಗಂಗಾವತಿ ನಗರದಲ್ಲಿ ಸ್ಕೂಟರ್ ನಲ್ಲಿದ್ದ 3 ಲಕ್ಷ ರೂ ಕಳ್ಳತನ

ಎನ್ ಶಾಮೀದ್ ತಾವರಗೇರಾ ಕೊಪ್ಪಳ ಜಿಲ್ಲೆ ಗಂಗಾವತಿ ನಗರದಲ್ಲಿ ಸ್ಕೂಟರನಲ್ಲಿಟ್ಟಿದ್ದ ಮೂರು ಲಕ್ಷ ರೂ.ಗಳನ್ನು ಕಳ್ಳತನ ಮಾಡಿದ ಘಟನೆ ಜರುಗಿದೆ. ನಗರದ ತಹಸೀಲ್ದಾರ್ ಕಚೇರಿ ಹತ್ತಿರ ನಗರದ ವೇಷಗಾರರ ಕಾಲೋನಿಯ‌ ನಿವಾಸಿ ಸುರೇಶ ಎನ್ನುವವರು ತಮ್ಮ ಭೂಮಿ ಖರೀದಿಯ ಸಬ್ ರೆಜಿಸ್ಟರಗೆ ತೆರಳಿದಾಗ ಕಚೇರಿ ಮುಂದುಗಡೆ ತಮ್ಮ ಸ್ಕೂಟರ್ ನಿಲ್ಲಿಸಿ ನೊಂದಣಿ ಕಚೇರಿಗೆ ತೆರಳಿದ್ದ ಸಂಧರ್ಬದಲ್ಲಿ ಸ್ಕೂಟರ್ ಬಾಕ್ಸ್ ನಲ್ಲಿ ಇಟ್ಟಿದ್ದ ಮೂರು ಲಕ್ಷ ರೂ.ಗಳನ್ನು ಕಳ್ಳತನ ಮಾಡಲಾಗಿದೆ. ಹಣ …

Read More »

ಶಿಕ್ಷಣ ಇಲಾಖೆ ನಿರ್ದೇಶಕರಾದ ಡಾ. ಡಿ ಕೆ ಎಸ್ ವರ್ಧನ ಶಾಲೆಗೆ ಭೇಟಿ

  ಎನ್ ಶಾಮೀದ್ ತಾವರಗೇರಾ ತಾವರಗೇರಾ:  ಕಲಬುರ್ಗಿ ಈಶಾನ್ಯ ವಲಯ ಶಿಕ್ಷಣ ಇಲಾಖೆ ಆಯುಕ್ತ   ನಿರ್ದೇಶಕರಾದ ಡಾಕ್ಟರ್ ಡಿ ಕೆ ಎಸ್ ವರ್ಧನ ಅವರು ಪಟ್ಟಣದ ಕರ್ನಾಟಕ ಪಬ್ಲಿಕ್ ಶಾಲೆಗೆ ಅನಿರೀಕ್ಷಿತವಾಗಿ ಭೇಟಿ ನೀಡಿ ವಿದ್ಯಾಗಮ ಟು ಪಾಯಿಂಟ್ ಝೀರೋ (2.0) ಕಾರ್ಯಕ್ರಮವನ್ನು ಖುದ್ದು ಪರಿಶೀಲಿಸಿದರು. ವಿದ್ಯಾ ಗಮ ಕಾರ್ಯಕ್ರಮ ಮಕ್ಕಳ ಹಾಜರಾತಿ ಬಗ್ಗೆ ಉತ್ತಮ ಅಭಿಪ್ರಾಯ ವ್ಯಕ್ತಪಡಿಸಿದರು. ಎಲ್ಲ ಶಾಲೆಗಳಲ್ಲಿ ಕಡ್ಡಾಯ ವಾಗಿ ಸೋಪ್  ಬಳಸಬೇಕು ಮಕ್ಕಳ ಹಾಜರಾತಿಯನ್ನು …

Read More »

ತಾವರಗೇರಾ ಗ್ರಾಹಕ ಸೇವಾ ಕೇಂದ್ರದ “ಕಳ್ಳ”ರ ಬಂಧನ

ಎನ್ ಶಾಮೀದ್ ತಾವರಗೇರಾ ಕಳೆದ ತಿಂಗಳು ಕುಷ್ಟಗಿ ಬಟ್ಟೆ ಅಂಗಡಿ ಹಾಗೂ ತಾವರಗೇರಾ ಎಸ್ ಬಿಐ ಗ್ರಾಹಕರ ಸೇವಾ ಕೇಂದ್ರ ದಲ್ಲಿ ಕಳ್ಳತನ ಮಾಡಿದ್ದ ಆರೋಪಿತರನ್ನು ಬಂಧಿಸುವ ಲ್ಲಿ ಪೊಲೀಸ್ ರು ಯಶಸ್ವಿಯಾಗಿದ್ದಾರೆ. ಕುಷ್ಟಗಿಯ ಗಜೇಂದ್ರಗಡ ರಸ್ತೆ ಯಲ್ಲಿರುವ ಆರ್ ಜೆ ಬಟ್ಟೆ ಅಂಗಡಿ ಯಲ್ಲಿ ರೆಡಿಮೇಡ ಬಟ್ಟೆಗಳು ಮತ್ತು ನಗದು ಹಣ ಕಳ್ಳತನ ಹಾಗೂ ತಾವರಗೇರಾ ಗ್ರಾಹಕರ ಸೇವಾ ಕೇಂದ್ರ ದಲ್ಲಿ ನಗದು ಹಣವನ್ನು ಕಳ್ಳತನ ಮಾಡಿದ್ದ, ಆರೋಪಿಗಳನ್ನು …

Read More »

ಮಸ್ಕಿಯಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ

  ಎನ್ ಶಾಮೀದ್ ತಾವರಗೇರಾ ಮಸ್ಕಿ: ಸ್ಥಳೀಯ ಅನ್ನಪೂರ್ಣ ನರ್ಸಿಂಗ್ ಹೋಮ್ ನಲ್ಲಿ ಉಚಿತ ತಪಾಸಣಾ ಶಿಬಿರ ಏರ್ಪಡಿಸಲಾಗಿದ್ದು, ಸಾರ್ವಜನಿಕರು ಇದರ ಪ್ರಯೋಜನ ಪಡೆದುಕೊಳ್ಳಬೇಕೆಂದು ಅನ್ನಪೂರ್ಣ ನರ್ಸಿಂಗ್ ಹೋಮ್ ವೈದ್ಯರು ಪ್ರಕಟಣೆ ಯಲ್ಲಿ ತಿಳಿಸಿದ್ದಾರೆ. ಬೆಂಗಳೂರಿನ ಸಪ್ತಗಿರಿ ಆಸ್ಪತ್ರೆ ಹಾಗು ರುದ್ರ ವೆಲ್ ಫೇರ್ ಮತ್ತು ಚಾರಿಟೇಬಲ್ ಟ್ರಸ್ಟ್ ಮತ್ತು ಅನ್ನಪೂರ್ಣ ನರ್ಸಿಂಗ್ ಹೋಮ್ ಇವರ ಸಂಯುಕ್ತ ಆಶ್ರಯದಲ್ಲಿ ಉಚಿತ ಹೃದಯ ರೋಗ, ನರ ರೋಗ, ಮೂತ್ರಪಿಂಡ ರೋಗ, ಕ್ಯಾನ್ಸರ್ …

Read More »

ಪಟ್ಟಣದ ಗೊಂದಲಿಗರ ತತ್ವಪದಕಾರ ತಿಪ್ಪಣ್ಣ ಸುಗತೇಕರ ಅವರಿಗೆ ಒಲಿದ ಜಾನಪದ ಅಕಾಡೆಮಿ ಪ್ರಶಸ್ತಿ

Read More »

ಪ್ರಧಾನಮಂತ್ರಿ ಆವಾಸ ಯೋಜನೆಯ `ರಾಷ್ಟ್ರೀಯ` ಪುರಸ್ಕಾರಕ್ಕೆ ತಾವರಗೇರಾ ಪಟ್ಟಣದ ಶಕುಂತಲಾ ಮಲ್ಲಪ್ಪ ನಾಲತವಾಡ ಆಯ್ಕೆ

  ಎನ್ ಶಾಮೀದ್ ತಾವರಗೇರಾ ಪ್ರಧಾನ ಮಂತ್ರಿ ಆವಾಸ ಯೋಜನೆಯಡಿಯಲ್ಲಿ ಅತ್ಯುತ್ತಮ ಮನೆ ನಿರ್ಮಾಣದ ಫಲಾನುಭವಿಗಳಿಗೆ ನೀಡಲಾಗುವ ರಾಷ್ಟ್ರೀಯ ಪುರಸ್ಕಾರಕ್ಕೆ ರಾಜ್ಯದಿಂದ ಮೂವರು ಫಲಾನುಭವಿಗಳು ಆಯ್ಕೆಯಾಗಿದ್ದು ಅದರಲ್ಲಿ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ತಾವರಗೇರಾ ಪಟ್ಟಣ ಪಂಚಾಯತಿಯ ಶಕುಂತಲಾ ಮಲ್ಲಪ್ಪ ನಾಲತವಾಡ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಶುಕ್ರವಾರ ದಂದು ಜಿಲ್ಲಾಧಿಕಾರಿಗಳ ಕಾರ್ಯಾಲಯದಲ್ಲಿ ಪ್ರಧಾನಮಂತ್ರಿಗಳ ವಿಡಿಯೋ ಸಂವಾದ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಈ ಸಂಧರ್ಬದಲ್ಲಿ ತಾವರಗೇರಾ ಪಟ್ಟಣ …

Read More »

ರಾಜ್ಯ ಮಟ್ಟದ ಮೇಘ ಮೈತ್ರಿ ಪ್ರಶಸ್ತಿಗೆ ಕು. ಸಮೀರ್ ಅಲ್ಲಾಗಿರಿರಾಜ ಆಯ್ಕೆ

  ಎನ್ ಶಾಮೀದ್ ತಾವರಗೇರಾ ಕನಕಗಿರಿ: ಜನೆವರಿ 01 ಬಾಗಲಕೋಟೆ ಜಿಲ್ಲೆ ಕಮತಗಿಯ ಮೇಘಮೈತ್ರಿ ಕನ್ನಡ ಮತ್ತು ಸಾಹಿತ್ಯ ವೇದಿಕೆ ಇವರು ಪ್ರತಿ ವರ್ಷ ನೀಡುವ ರಾಜ್ಯ ಮಟ್ಟದ”ಮೇಘಮೈತ್ರಿ ಬಾಲ ಪುರಸ್ಕಾರ” 2020 ನೇ ಸಾಲಿನ ಪ್ರಶಸ್ತಿಗೆ ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಕು.ಸಮೀರ್ ಕನಕಗಿರಿ ಆಯ್ಕೆಯಾಗಿದ್ದಾನೆ. ಕಳೆದ ಮೂರು ನಾಲ್ಕು ವರ್ಷಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಟಿಕ್ ಟಾಕ್ ಮೂಲಕ ಲಕ್ಷಾಂತರ ಜನ ಗಮನ ಸೆಳಿದಿರು ಕು.ಸಮೀರ್ …

Read More »

ಪಾಲಕರ ಆತಂಕದ ನಡುವೆ ಶಾಲಾ ಕಾಲೇಜು ಆರಂಭ

  ಎನ್ ಶಾಮೀದ್ ತಾವರಗೇರಾ ತಾವರಗೇರಾ: ಪಟ್ಟಣ ಸೇರಿದಂತೆ ಹೋಬಳಿ ವ್ಯಾಪ್ತಿಯ ಶಾಲಾ, ಕಾಲೇಜುಗಳು ಶುಕ್ರವಾರ ಪ್ರಾರಂಭವಾದವು. ಕಳೆದ 10-11 ತಿಂಗಳಿನಿಂದ ಕೊರೊನಾ ವೈರಸ್ ಭೀತಿಯಿಂದ ಮುಚ್ಚಲಾಗಿದ್ದ ಶಾಲೆ, ಕಾಲೇಜುಗಳನ್ನು ಗುರುವಾರ ಸ್ಯಾನಿಟೈಜರ್ ಮಾಡಿ ಶುಚಿ ಗೊಳಸಿದ್ದರು. ಶುಕ್ರವಾರ ಶಾಲಾ ಕಾಲೇಜುಗಳ ಕಂಬಕ್ಕೆ ಮತ್ತು ಗೇಟ್ ಗೆ ತಳಿರು, ತೊರಣಗಳನ್ನು ಕಟ್ಟಿ ಶಾಲೆಗಳನ್ನು ಶೃಂಗಾರಗೊಳಿಸಿ ವಿದ್ಯಾಗಮ ಕಾರ್ಯಕ್ರಮ ಯೋಜನೆ ಅಡಿಯಲ್ಲಿ ವಿದ್ಯಾರ್ಥಿಗಳನ್ನು ಶಿಕ್ಷಕರು ಸ್ವಾಗತಿಸಿಕೊಂಡರು. ಕೊರೊನಾ ಮುಂಜಾಗೃತ ಕ್ರಮವಾಗಿ ಪ್ರತಿಯೊಂದು …

Read More »

ಅಂಗನವಾಡಿ ನೌಕರರಿಂದ ಪ್ರತಿಭಟನೆ

ಎನ್ ಶಾಮೀದ್  ತಾವರಗೇರಾ ಪಟ್ಟಣದ ಶ್ರೀಬಸವೇಶ್ವರ ವೃತ್ತದಲ್ಲಿ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ (ಸಿಐಟಿಯು ಸಂಯೋಜಿತ) ತಾಲೂಕಾ ಸಮಿತಿ ವತಿಯಿಂದ ವಿವಿಧ ಬೇಡಿಕಗಳ ಆಗ್ರಹಿಸಿ ಪ್ರತಿಭಟನೆ ನಡೆಯಿತು. ಪಟ್ಟಣದ ಶ್ರೀಬಸವೇಶ್ವರ ವೃತ್ತದಲ್ಲಿ ತಾವರಗೇರಾ ಸೇರಿದಂತೆ ಮುದೇನೂರು, ಹಿರೇಮನ್ನಾಪೂರ ವಲಯಗಳ ಎಲ್ಲಾ ಅಂಗನವಾಡಿ ಕಾರ್ಯಕರ್ತೆಯರು, ಅಂಗನವಾಡಿ ಅಡುಗೆ ಸಹಾಯಕರು ಸೇರಿದಂತೆ ಅಂಗನವಾಡಿ ನೌಕರರು ವಿವಿಧ ಬೇಡಿಕಗಳ ಆಗ್ರಹಿಸಿ ಪ್ರತಿಭಟನೆ ನಡೆಸಿದರು. ನಂತರ ಕಂದಾಯ ನೀರಿಕ್ಷಕ ಶರಣಪ್ಪ ದಾಸರ ಮನವಿ ಪತ್ರ …

Read More »
error: Content is protected !!