Wednesday , October 23 2024
Breaking News
Home / N Shameed (page 29)

N Shameed

ತಾವರಗೇರಾ: ವೀಕೆಂಡ್ ಕಫ್ಯೂ೯, ಪೊಲೀಸರಿಂದ ಕಟ್ಟುನಿಟ್ಟಿನ ಕ್ರಮ..!

ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ವೀಕೆಂಡ್ ಕಫ್ಯೂ೯ ಹಿನ್ನಲೆ ಪಟ್ಟಣದಲ್ಲಿ ನಿನ್ನೆ ರಾತ್ರಿ ಯಿಂದಲೇ ಅಂಗಡಿ ಮುಂಗಟ್ಟುಗಳು ಸಂಪೂರ್ಣ ಬಂದ್ ಮಾಡಲಾಗಿದ್ದು ಪೊಲೀಸ್ ಹಾಗೂ ಪಟ್ಟಣ ಪಂಚಾಯತ ಸಿಬ್ಬಂದಿ ಸೇರಿ‌ ಪಟ್ಟಣದಲ್ಲಿ ಅನಾವಶ್ಯಕವಾಗಿ ಹೊರಗಡೆ ಬಂದವರಿಗೆ ದಂಡ ವಿಧಿಸುವ ಮೂಲಕ ಯಾರು ಬೇಕಾಬಿಟ್ಟಿ ಓಡಾಡದಂತೆ ನಿರ್ಬಂಧ ವಿಧಿಸಿರುವದು ಕಂಡು ಬಂತು. ಈ ಸಂದರ್ಭದಲ್ಲಿ ಸ್ಥಳೀಯ ಪಿಎಸ್ಐ ವೈಶಾಲಿ ಝಳಕಿ ಮಾತನಾಡಿ ಯಾರು ಹೊರ ಬರದೇ ಕರೊನಾ ನಿಯಮಗಳನ್ನು ಕಟ್ಟುನಿಟ್ಟಾಗಿ …

Read More »

ತಾವರಗೇರಾ: ವಾಹನ ಡಿಕ್ಕಿ ಸ್ಥಳದಲ್ಲೇ ವ್ಯಕ್ತಿ ಸಾವು..!

ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ಬಹಿರ್ದೆಸೆಗೆಂದು ತೆರಳಿದ್ದ ವ್ಯಕ್ತಿಯೊಬ್ಬನ ಮೇಲೆ ಮಿನಿ ಗೂಡ್ಸ್ ವಾಹನ ಡಿಕ್ಕಿ ಹೊಡೆದ ಪರಿಣಾಮ ವ್ಯಕ್ತಿಯು ಸ್ಥಳದಲ್ಲೆ ಮೃತ ಪಟ್ಟ ಘಟನೆ ಸಮೀಪದ ಮುದೇನೂರ ಗ್ರಾಮದಲ್ಲಿ ನಡೆದಿದೆ. ಮೃತ ವ್ಯಕ್ತಿಯನ್ನು ಹನುಮಂತಪ್ಪ ಕುಷ್ಟಗಿ (54) ಎಂದು ಗುರುತಿಸಲಾಗಿದ್ದು ವಾಹನ ಸವಾರನು ಸ್ಥಳದಲ್ಲೇ ವಾಹನ ಬಿಟ್ಟು ಪರಾರಿಯಾಗಿದ್ದು ಪೊಲೀಸರು ತನಿಖೆ ಕೈಗೊಂಡಿದ್ದಾರೆ, ಸ್ಥಳೀಯ ಪ್ರಕರಣ ದಾಖಲಾಗಿದೆ.

Read More »

ಆಕಸ್ಮಿಕ ಬೆಂಕಿಗೆ ಕಾರು ಭಸ್ಮ..!

ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ಸಮೀಪದ ಜುಮಲಾಪೂರ – ಮುದೇನೂರ ರಸ್ತೆಯಲ್ಲಿ ಚಲಿಸುತ್ತಿದ್ದ ಕಾರಿಗೆ ಆಕಸ್ಮಿಕವಾಗಿ ಇಂಜೀನ್ ನಲ್ಲಿ ಬೆಂಕಿ ಕಾಣಿಸಿಕೊಂಡು ಸಂಪೂರ್ಣ ಕಾರು ಭಸ್ಮಗೊಂಡ ಘಟನೆ ನಡೆದಿದೆ. ಸಮೀಪದ ಸಾಸ್ವಿಹಾಳ ಗ್ರಾಮದ ಅಡಿವೆಪ್ಪ ತೊಂಡಿಹಾಳ ಇವರು ತಮ್ಮ ಮಗನನ್ನು ಕರೆತರಲು ಚಲಿಸುತ್ತಿರುವ ಮಾರ್ಗ ಮಧ್ಯದಲ್ಲಿ ಈ ಘಟನೆ ಸಂಭವಿಸಿದೆ. ಕಾರಿಗೆ ಬೆಂಕಿ ತಗುಲಿದ್ದನ್ನು ಕಂಡು ಅಡಿವೆಪ್ಪ ತಕ್ಷಣ ಇಳಿದುಕೊಂಡು ಪ್ರಾಣಾಪಯಾ ದಿಂದ ಪಾರಾಗಿದ್ದಾನೆ.ತಕ್ಷಣವೇ ಅಗ್ನಿ ಶಾಮಕ ದಳ …

Read More »

ರಚ್ಚುಗೆ ಮೊದಲು Love You ಹೇಳಿದ್ದು ಕೊಪ್ಪಳ ಜಿಲ್ಲೆಯ ತಾವರಗೇರಾದ ಶಂಕರ್ ಈಡಿಗೇರ…!

ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ವರ್ಷದ ಕೊನೆಯ ದಿನದಂದು ತೆರೆ ಕಾಣಲಿರುವ ‘Love You ರಚ್ಚು’ ಸಿನಿಮಾಕ್ಕೆ ನಿರ್ದೇಶನ ಮಾಡಿರುವುದು ಕೊಪ್ಪಳ ಜಿಲ್ಲೆಯ ತಾವರಗೇರಾ ಪಟ್ಟಣದ ಯುವ ಪ್ರತಿಭೆ ಎಂಬುದು ವಿಶೇಷ..! ನಟಿ ರಚಿತಾ ರಾಮ್ ಹಾಗೂ ನಟ ಅಜಯರಾವ್ ಇವರ ನಟನೆಯ ‘Love You ರಚ್ಚು’ ಸೂಪರ್ ಹಿಟ್ ಚಲನಚಿತ್ರಕ್ಕೆ ನಿರ್ದೇಶನ ಮಾಡಿರುವುದು ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ತಾವರಗೇರಾ ಪಟ್ಟಣದ ನಿವಾಸಿ ಶಂಕರ್ ಎಸ್ ರಾಜ್ …

Read More »

ತಾವರಗೇರಾ: ಲಾಟರಿ ಮೂಲಕ ಬಂಪರ ಹೊಡೆದ ದಶರಥ ಸಿಂಗ್..!

ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ಅದೃಷ್ಟದಾಟ ಬಲ್ಲವರಾರು, ಎಂಬ ನಾನ್ನುಡಿ ಅಂತೆ ನಡೆದ ಪಪಂ ಫಲಿತಾಂಶದಲ್ಲಿ ಸಮ ಮತಗಳನ್ನು ಪಡೆದುಕೊಂಡು ನಂತರ ಚೀಟಿ ಎತ್ತಿದಾಗ ಬಿಜೆಪಿಯ ಅಭ್ಯರ್ಥಿ ದಶರಥ ಸಿಂಗ್ ಜಯದ ಮಾಲೆಯನ್ನು ತಮ್ಮದಾಗಿಸಿಕೊಂಡರು. ಪಟ್ಟಣದ 1 ನೇ ವಾರ್ಡಿನಿಂದ ಕಾಂಗ್ರೆಸ್ ನ ಹನುಮಂತ ಸಿಂಗ್ ಹಾಗೂ ಬಿಜೆಪಿಯಿಂದ ಸ್ಫರ್ಧಿಸಿದ್ದ ದಶರಥ ಸಿಂಗ್ ಇವರು ತಲಾ 242 ಮತಗಳನ್ನು ಪಡೆಯುವ ಮೂಲಕ ಸಮಬಲ ಸಾದಿಸಿದ್ದರು, ನಂತರ ಚುನಾವಣಾ ನಿಯಮದ …

Read More »

ತಾವರಗೇರಾ: ಪಪಂ ಚುನಾವಣೆಯಲ್ಲಿ ಜಯದ ನಗೆ ಬೀರಿದ, ವಿಜಯಶಾಲಿಗಳು..!

ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ತಾವರಗೇರಾ ಪಟ್ಟಣ ಪಂಚಾಯಿತಿಗೆ ನಡೆದ ಚುನಾವಣೆಯಲ್ಲಿ ಇಂದು ಫಲಿತಾಂಶ ಪ್ರಕಟವಾಗಿದ್ದು ಒಟ್ಟು 18 ವಾರ್ಡುಗಳಲ್ಲಿ ಈಗಾಗಲೇ 3 ಸ್ಥಾನಗಳು ಅವಿರೋಧ ವಾಗಿ ಆಯ್ಕೆ ಯಾಗಿದ್ದರೆ, ಇನ್ನುಳಿದ 15 ಸ್ಥಾನಗಳ ಫಲಿತಾಂಶ ಪ್ರಕಟವಾಗಿದೆ. 1 ನೇ ವಾರ್ಡಿನ ಫಲಿತಾಂಶ ರೋಚಕ ವಾಗಿದ್ದು ಎರಡು ಅಭ್ಯರ್ಥಿಗಳು ಸರಿಸಮ ಮತಗಳನ್ನು ಪಡೆದಿದ್ದರಿಂದಾಗಿ ಚೀಟಿ ಎತ್ತುವ ಮೂಲಕ ಬಿಜೆಪಿಯ ದಶರಥ ಸಿಂಗ್ ಅದೃಷ್ಟ ತಮ್ಮದಾಗಿಸಿಕೊಂಡರು. 3 ನೇ ವಾರ್ಡಿನ್ …

Read More »

ತಾವರಗೇರಾ: ಮುಗಿದ ಚುನಾವಣಾ ಕಾವು, ಅಭ್ಯರ್ಥಿಗಳ ಚಿತ್ತ, “ಫಲಿತಾಂಶ”ದತ್ತ..!

ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ಪಟ್ಟಣದ 15 ವಾಡ್೯ ಗಳಲ್ಲಿ ನಡೆದ ಚುನಾವಣೆ ಯಲ್ಲಿ ಶೇಕಡಾ 80.69% ರಷ್ಟು ಮತದಾನವಾಗಿದ್ದು, ಬಹುತೇಕ ಶಾಂತಿಯುತ ವಾಗಿ ನಡೆಯಿತು. ಒಟ್ಟು 8783 ಮತ ಚಲಾವಣೆಯಾಗಿದ್ದು 4426 ಪುರುಷ ಮತದಾರರು ಹಾಗೂ 4357 ಮಹಿಳೆಯರು ಮತಚಲಾಯಿಸಿದ್ದಾರೆ. ಸಣ್ಣ ಪುಟ್ಟ ಘಟನೆಗಳನ್ನು ಹೊರತು ಪಡಿಸಿ ಶಾಂತಿಯುತ ವಾಗಿ ಮತದಾನ ನಡೆಯಿತು. ಅಭ್ಯರ್ಥಿಗಳ ಭವಿಷ್ಯ ವನ್ನು ಮತದಾರರು ಬರೆದಿದ್ದು ಅಭ್ಯರ್ಥಿಗಳು ತಮ್ಮ ಸೋಲು ಹಾಗೂ ಗೆಲುವಿನ …

Read More »

ತಾವರಗೇರಾ: ಮತದನಾದಿಂದ ವಂಚಿತನಾದ ನೌಕರ..!

ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ಪಟ್ಟಣ ಪಂಚಾಯತಿ ಚುನಾವಣೆಯಲ್ಲಿ ವಾರ್ಡ್ ನಂ 9 ರ ಪಿಆರ್ ಓ ನಿರ್ಲಕ್ಷ ದಿಂದಾಗಿ ಮತದಾನರೊಬ್ಬರ ಮತ ಚಲಾಯಿಸುವ ಹಕ್ಕಿನಿಂದ ವಂಚಿತರಾದ ಘಟನೆ ಜರುಗಿತು. ಮತದಾನ ಮಾಡಲು ಬಂದ ಖಾಜಾಹುಸೇನ ಎಂಬುವವರು ಮತದಾನ ಮಾಡಲು ಬಂದಾಗ ಅವರ ಹೆಸರಿನಲ್ಲಿ ಬೇರೊಬ್ಬರು ಮತದಾನ ಮಾಡಿರುವುದು ತಿಳಿಯುತ್ತಿದ್ದಂತೆಯೇ ಗೊಂದಲಕ್ಕಿಡಾಗಿ, ನಾನು ಮತ ಚಲಾಯಿಸದೇ ಬೆರೊಬ್ಬರು ಮತಚಲಾಯಿಸಿರುದು ಇದು ಯಾವ ನ್ಯಾಯ ವೆಂದು ಮಾದ್ಯಮದವರ ಮುಂದೆ ತಮ್ಮ …

Read More »

ತಾವರಗೇರಾ: ಪಪಂ ಚುನಾವಣೆಗೆ ಪಟ್ಟಣದಲ್ಲಿ ಪೊಲೀಸ್ ಸರ್ಪಗಾವಲು..!

ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ಪಪಂ ಚುನಾವಣೆಯ ಮತದಾನ ಸೋಮವಾರ ನಡೆಯಲಿದ್ದು ಈಗಾಗಲೇ ಬಿಗುವಿನ ವಾತಾವರಣ ನಿರ್ಮಾಣಗೊಂಡಿದ್ದರಿಂದ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಇಲಾಖೆಯು ಪಟ್ಟಣದಲ್ಲಿ ಸರ್ಪಗಾವಲು ಹಾಕಿದೆ. ಈ ಕುರಿತಂತೆ ಸಿಪಿಐ ಎನ್ ಆರ್ ನಿಂಗಪ್ಪ ಮಾಹಿತಿ ನೀಡಿ ಒಟ್ಟು 18 ಮತಗಟ್ಟೆಗಳಲ್ಲಿ 5 ಮತಗಟ್ಟೆಗಳನ್ನು ಅತೀ ಸೂಕ್ಷ್ಮ ಹಾಗೂ 5 ಸೂಕ್ಷ್ಮ ಮತಗಟ್ಟೆಗಳು, ಹಾಗೂ 8 ಸಾಮಾನ್ಯ ಮತಗಟ್ಟೆಗಳೆಂದು ಗುರುತಿಸಲಾಗಿದ್ದು ಒಬ್ಬರು ಸಿಪಿಐ, 3 …

Read More »

ಪಪಂ ಚುನಾವಣೆ, ಪಟ್ಟಣದಲ್ಲಿ ಬಿಗುವಿನ ವಾತಾವರಣ..!

ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ಚುನಾವಣಾಧಿಕಾರಿಗಳ ಪರಿಪೂರ್ಣ ಮಾಹಿತಿಯ ಕೊರತೆಯಿಂದಾಗಿ ಕಾನೂನು ನಿಯಮಗಳನ್ನು ಗಾಳಿಗೆ ತೂರಿ ಪ್ರಚಾರ ನಡೆಸಲು ಶಾಸಕರು ಮುಂದಾಗಿದ್ದಾರೆಂದು ಸ್ಥಳೀಯ ನಾಗರಿಕಾ ಸೇವಾ ಸಮಿತಿ ಆರೋಪಿಸಿದ್ದರಿಂದ ಪಟ್ಟಣದಲ್ಲಿ ಬಿಗುವಿನ ವಾತಾವರಣ ನಿರ್ಮಾಣಗೊಂಡಿತ್ತು. ಸದ್ಯ ಪಟ್ಟಣದಲ್ಲಿ ಪೊಲೀಸರು ಬೀಡು ಬಿಟ್ಟು ಪರಿಸ್ಥಿತಿ ಹತೋಟಿಗೆ ತರಲು ಯಶಸ್ವಿಯಾಗಿದ್ದಾರೆ. ಚುನಾವಣಾ ಅಧಿಕಾರಿಗಳ ಅಪೂರ್ಣ ಮಾಹಿತಿಯೇ ಈ ಘಟನೆಗೆ ಕಾರಣವಾಗಿದ್ದು ನಂತರ ಸ್ಥಳಕ್ಕೆ ತಹಶಿಲ್ದಾರರ ರಾದ ಎಂ ಸಿದ್ದೇಶ, ಕುಷ್ಟಗಿ ಸಿಪಿಐ …

Read More »
error: Content is protected !!