Wednesday , October 23 2024
Breaking News
Home / N Shameed (page 46)

N Shameed

ತಾವರಗೇರಾ: ಪಟ್ಟಣಕ್ಕೆ ಮಲ್ಲಿಕಾರ್ಜುನ ಖರ್ಗೆ..!

ವರದಿ ಎನ್ ಶಾಮೀದ್ ತಾವರಗೇರಾ  ತಾವರಗೇರಾ: ಮಸ್ಕಿ ಉಪಚುನಾವಣೆ ಪ್ರಚಾರದಲ್ಲಿ ಪಾಲ್ಗೊಳ್ಳಲು ಕಾಂಗ್ರೆಸ್ ನ ಹಿರಿಯ ಮುಖಂಡ ಹಾಗೂ ರಾಜ್ಯ ಸಭಾ ವಿರೋಧ ಪಕ್ಷದ ನಾಯಕ ರಾದ ಮಲ್ಲಿಕಾರ್ಜುನ ಖರ್ಗೆ ಅವರು ದಿನಾಂಕ 11-04-2021 ಭಾನುವಾರ ಸ್ಥಳೀಯ ಅಯ್ಯನಗೌಡ ಮಾಲಿ ಪಾಟೀಲ್ ಅವರ ಜಾಗದಲ್ಲಿ ತಾತ್ಕಾಲಿಕವಾಗಿ ನಿರ್ಮಿಸಲಾಗಿರುವ ಹೆಲಿಪ್ಯಾಡ್ ಗೆ ಹೆಲಿಕಾಪ್ಟರ್ ಮೂಲಕ ಆಗಮಿಸಲಿದ್ದಾರೆ.

Read More »

ತಾವರಗೇರಾ: ಕಾಂಗ್ರೇಸ್ ನವರಲ್ಲಿ ತಾಕತ್ತಿದ್ದರೇ, ಮಸ್ಕಿಯಲ್ಲಿ ಗೆದ್ದು ತೋರಿಸಲಿ..! – ಬಿ ವೈ ವಿಜಯೇಂದ್ರ

ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ಮಸ್ಕಿ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸೋಲುವ ಹತಾಶೆ ಯಿಂದಾಗಿ ಕಾಂಗ್ರೆಸ್ ಮುಖಂಡರು, ಬಿಜೆಪಿ ಯವರು ಹಣ ಹಂಚುತ್ತಿದ್ದಾರೆಂದು ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿವೈ ವಿಜಯೇಂದ್ರ ಹೇಳಿದರು.                                ಅವರು ಶನಿವಾರ ಪಟ್ಟಣದ ಮೇಗಾ ರೆಸಿಡೆನ್ಸಿ ಯಲ್ಲಿ ಸುದ್ದಿಗಾರರೊಂದಿಗೆ …

Read More »

ಮಸ್ಕಿ ಕ್ಷೇತ್ರದಲ್ಲಿ ಅಧಿಕಾರ ದುರ್ಬಳಕೆಯಿಂದ ಪ್ರಜಾಪ್ರಭುತ್ವ ಕಗ್ಗೊಲೆ..!

  ವರದಿ ಎನ್ ಶಾಮೀದ್ ತಾವರಗೇರಾ ಮಸ್ಕಿ: ಕ್ಷೇತ್ರದಲ್ಲಿ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಹಣ ಹಂಚುವ ಮೂಲಕ ಪ್ರಜಾಪ್ರಭುತ್ವದ ಕಗ್ಗೊಲೆ ಮಾಡುತ್ತಿದ್ದಾರೆಂದು ಕಾಂಗ್ರೆಸ್ ಮುಖಂಡರು ಆರೋಪಿಸಿದರು. ಶುಕ್ರವಾರದಂದು ಮಸ್ಕಿಯಲ್ಲಿ ನಡೆದ ಕಾಂಗ್ರೆಸ್ ಸಾಂಕೇತಿಕ ಧರಣಿ ನಡೆಸುವ ಮೂಲಕ ಚುನಾವಣೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿ ಮಾಜಿ ಸಚಿವ ರಾಮಲಿಂಗ ರೆಡ್ಡಿ ಹಾಗೂ ಬಸವರಾಜ ರಾಯರೆಡ್ಡಿ ಮಾತನಾಡಿ ಮುಖ್ಯಮಂತ್ರಿ ಯಡಿಯೂರಪ್ಪ ಪುತ್ರ ಹಾಗೂ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ ವೈ ವಿಜಯೇಂದ್ರ …

Read More »

ತಾವರಗೇರಾ: ಏಪ್ರಿಲ್ 9 ಶುಕ್ರವಾರದಂದು ವಿದ್ಯುತ್ ಸ್ಥಗಿತ

  ವರದಿ ಎನ್ ಶಾಮೀದ್ ತಾವರಗೇರಾ ಕುಷ್ಟಗಿ: ತಾಲೂಕಿನ ತಾವರಗೇರಾ ಸೇರಿದಂತೆ ದಿನಾಂಕ 09-04-2021 ರಂದು 220 ಕೆವಿ ವಿದ್ಯುತ್ ಸ್ವೀಕರಣ ಕೇಂದ್ರ ಕುಷ್ಟಗಿಯಲ್ಲಿ ತ್ರೈಮಾಸಿಕ ನಿರ್ವಹಣಾ ಕಾಮಗಾರಿ ನಿಮಿತ್ಯ ಬೆಳಿಗ್ಗೆ 8:00 ಗಂಟೆಯಿಂದ ಸಾಯಂಕಾಲ 6:00 ಗಂಟೆಯವರೆಗೆ ವಿದ್ಯುತ್ ವ್ಯತ್ಯಯ ಉಂಟಾಗುವುದೆಂದು ಜೆಸ್ಕಾಂ ಇಂಜಿನಿಯರ್ ತಿಳಿಸಿದ್ದಾರೆ. 220 ಕೆವಿ ವಿದ್ಯುತ್ ಶಾಖೆಯ ವ್ಯಾಪ್ತಿಯಲ್ಲಿ ಬರುವ ದೋಟಿಹಾಳ, ಕೇಸೂರು, ಕ್ಯಾದಿಗುಪ್ಪ, ಶಿರಗುಂಪಿ, ಮುದೇನೂರ ಹಾಗೂ ತಾವರಗೇರಾ ಶಾಖೆಯ ವ್ಯಾಪ್ತಿಯಲ್ಲಿ ಬರುವ …

Read More »

ಮಸ್ಕಿ: ಬಿಸಿಲಿನ ತಾಪದ ನಡುವೆಯೂ, ರಂಗೇರಿದ ಚುನಾವಣಾ ಕಾವು..!

ವರದಿ ಎನ್ ಶಾಮೀದ್ ತಾವರಗೇರಾ ಮಸ್ಕಿ: ಮಸ್ಕಿ ಉಪಚುನಾವಣೆ ಮತ ಸಮರವು ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ಬಿಜೆಪಿ ಹಾಗೂ ಕಾಂಗ್ರೆಸ್ ಘಟಾನುಘಟಿಗಳು ಕ್ಷೇತ್ರದಲ್ಲಿ ಬಿಡು ಬಿಟ್ಟು ಚುನಾವಣೆ ಪ್ರಚಾರಕ್ಕೆ ಬಿಸಿಲಿನ ತಾಪವನ್ನು ಲೆಕ್ಕಿಸದೆ ಪ್ರಚಾರ ಕೈಗೊಂಡಿರುವುದು ಎಲ್ಲೆಡೆ ಕಂಡು ಬರುತ್ತಿದೆ. ಬಿಜೆಪಿಯಿಂದ ಸಚಿವರಾದ ಗೋವಿಂದ ಕಾರಜೋಳ, ಶ್ರೀರಾಮುಲು, ಆರ್ ಶಂಕರ್ ಹಾಗೂ ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ ವೈ ವಿಜಯೇಂದ್ರ ಸೇರಿದಂತೆ ಬಿಜೆಪಿ ಮುಖಂಡರು ಅಭ್ಯರ್ಥಿ ಪ್ರತಾಪಗೌಡ ಪಾಟೀಲ್ ಪರವಾಗಿ …

Read More »

ಸಾವಿನಲ್ಲೂ ಒಂದಾದ ಜೂಲಕಟ್ಟಿ ಸಹೋದರರು..!

ವರದಿ ಎನ್ ಶಾಮೀದ್ ತಾವರಗೇರಾ ಯಲಬುರ್ಗಾ : ವಿಧಿಯಾಟ ವಿಚಿತ್ರ ಅಂದರೆ ತಪ್ಪಾಗಲಾರದು. ಇಂತಹ ವಿಚಿತ್ರ ವಿಧಿಯಾಟವು ತಾಲೂಕಿನ ಮಂಡಮರಿ ಗ್ರಾಮದಲ್ಲಿನ ಜೂಲಕಟ್ಟಿ ಕುಟುಂಬದಲ್ಲಿ ಜರುಗಿ ಹೋಗಿದೆ..! 04-04-2021 ರಂದು ಶರಣಪ್ಪ ಮರಿಯಪ್ಪ ಜೂಲಕಟ್ಟಿ (42) ಮನನೊಂದು ಆತ್ಮಹತ್ಯೆ ಮಾಡಿಕೊಂಡು ಕುಟುಂಬ ಸೇರಿದಂತೆ ಇಡೀ ಗ್ರಾಮವನ್ನು ಸ್ಮಶಾನ ಮೌನಕ್ಕೆ ಕಾರಣವಾಗಿದ್ದ , ಇತನ ಸಾವಿನಿಂದ ಕುಟುಂಬದ ಸದಸ್ಯರಿಗೆ ದಿಕ್ಕು ದೊಚದಂತಾಗಿ ಕೈ ಚೆಲ್ಲಿ ಕುಳಿತುಕೊಂಡಿದ್ದರು. ಯುವಕನ ಸಾವಿನ ಸುದ್ದಿ ಮಾಸುವ …

Read More »

ತಾವರಗೇರಾ: ಡಿಮ್ ಆಗಿದ್ದ ಡಿ.ಕೆ.ಶಿವಕುಮಾರ..!

  ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ರಾಜಕಾರಣದಲ್ಲಿ ಕನಕಪುರದ ಬಂಡೆ ಎಂದು ಖ್ಯಾತಿ ಹೊಂದಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ‌.ಶಿವಕುಮಾರ ಅವರು ಇಂದು ಡಿಮ್ ಆಗಿರುವುದು ಕಂಡು ಬಂದಿತು..! ಜಿಲ್ಲೆಯ ತಾವರಗೇರಾ ಪಟ್ಟಣದಲ್ಲಿ ಮಸ್ಕಿ ಉಪ ಚುನಾವಣೆ ಪ್ರಚಾರ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ತೆರಳುವ ಮುನ್ನ ಹೇಲಿಪ್ಯಾಡನಿಂದ ಇಳಿದು, ಮಾಧ್ಯಮದವರಿಗೆ ಯಾವುದೇ ತರಹದ ಪ್ರತಿಕ್ರಿಯೆ ನೀಡದೆ ಕಾರನ್ನೇರಿದ್ದಲ್ಲದೆ, ಮಧ್ಯಮದವರು ಎಷ್ಟು ಒತ್ತಾಯಪಡಿಸಿದರು ಪ್ರತಿಕ್ರಿಯಿಸದೆ ಇದ್ದದ್ದನ್ನು ಗಮನಿಸಿದವರು “ಡಿ.ಕೆ.ಶಿ ಫುಲ್ ಡಿಮ್” ಆಗಿದ್ದಾರೆ …

Read More »

ತಾವರಗೇರಾ: ಬಿಜೆಪಿಯವರ ಆರೋಪಕ್ಕೆ ಸಾಕ್ಷಿಗಳಿಲ್ಲ ಸಿದ್ದರಾಮಯ್ಯ ಕಿಡಿ..!

ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ಯಾವುದೇ ಸಾಕ್ಷಿ ಆಧಾರಗಳಿಲ್ಲದೆ ಬಿಜೆಪಿಯವರು ಆರೋಪಿಸುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಜೆಪಿ ಮುಖಂಡರ ವಿರುದ್ಧ ಕಿಡಿಕಾರಿದರು..! ತಾವರಗೇರಾ ಪಟ್ಟಣದ ಹೊರವಲಯದಲ್ಲಿ ಮಸ್ಕಿ ಚುನಾವಣೆಯ ಬಹಿರಂಗ ಪ್ರಚಾರ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ತೆರಳುವ ಮುನ್ನ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು. ಸಚಿವ ಜಗದೀಶ ಶೆಟ್ಟರ್ ಸೇರಿದಂತೆ ಬಿಜೆಪಿಯವರ ಆರೋಪಕ್ಕೆ ಯಾವುದೇ ತರಹದ ಸಾಕ್ಷಿ ಆಧಾರಗಳಿರುವುದಿಲ್ಲ. ಅವರು ಕಾಂಗ್ರೆಸ್ ಪಕ್ಷದ ವಿರುದ್ಧ ಷಡ್ಯಂತ್ರ ಮಾಡುತ್ತಿದ್ದಾರೆ. ಸಿಡಿ ಪ್ರಕರಣ …

Read More »

ತಾವರಗೇರಾ: ಪಟ್ಟಣಕ್ಕೆ ಸಿದ್ದರಾಮಯ್ಯ, ಡಿಕೆಶಿ

ವರದಿ: ಎನ್ ಶಾಮೀದ್ ತಾವರಗೇರಾ ತಾವರಗೇರಾ : ಪಕ್ಕದ ಮಸ್ಕಿ ಉಪ ಚುನಾವಣೆಯ ಕಾವು ದಿನೆ ದಿನೇ ಹೆಚ್ಚಾಗುತ್ತಲೇ ಇದೆ. ಈ ಚುನಾವಣೆಗೆ ಪಟ್ಟಣವು ಶಕ್ತಿ ಕೇಂದ್ರವಾಗಿ ಹೊರಹೊಮ್ಮಿರುವುದು ವಿಶೇಷ. ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷದ ಮುಖಂಡರು ತಾವರಗೇರಾ ಪಟ್ಟಣದಲ್ಲಿನ ವಸತಿ ಕೇಂದ್ರಗಳು ಸೇರಿದಂತೆ ವಿವಿಧೆಡೆ ಈಗಾಗಲೇ ಬೀಡುಬಿಟ್ಟಿದ್ದಾರೆ. ಪಟ್ಟಣಕ್ಕೆ ಕೆಲವೇ ಕಿ.ಮೀ ದೂರದಲ್ಲಿರುವ ಮಸ್ಕಿ ಕ್ಷೇತ್ರದ ವಿವಿಧ ಗ್ರಾಮಗಳಲ್ಲಿ ಉಪ ಚುನಾವಣಾ ಪ್ರಚಾರದ ಹಿನ್ನಲೆಯಲ್ಲಿ ಕೆಲ ನಾಯಕರು ಪಟ್ಟಣವನ್ನೇ …

Read More »

ತಾವರಗೇರಾ: ರಸ್ತೆ ಅಪಘಾತ ಬೈಕ್ ಸವಾರ ಸ್ಥಳದಲ್ಲೇ ಸಾವು

ಎನ್ ಶಾಮೀದ್ ತಾವರಗೇರಾ ತಾವರಗೇರಾ: ಸಮೀಪದ ಕುಡ್ಲೂರ ತೆಗ್ಗಿಹಾಳ ಹತ್ತಿರ ನಡೆದ ರಸ್ತೆ ಅಪಘಾತದಲ್ಲಿ ಒಬ್ಬ ವ್ಯಕ್ತಿ ಮೃತ ಪಟ್ಟು ಮತ್ತೊಬ್ಬ ವ್ಯಕ್ತಿ ತೀವ್ರ ಗಾಯ ಗೊಂಡಿರುವ ಘಟನೆ ರವಿವಾರ ಮಧ್ಹ್ಯಾನ ನಡೆದಿದೆ. ಮೃತ ವ್ಯಕ್ತಿಯನ್ನು ಲಿಂಗಸಗೂರ ತಾಲೂಕಿನ ಮರಳಿ ಗ್ರಾಮದ ಬಸವರಾಜ ತಿಮ್ಮಾಪೂರ ಕುರುಬರ, (27) ಮತ್ತು ಅದೇ ಗ್ರಾಮದ ಅಯ್ಯಪ್ಪ ಭೋದುರ ಕುರುಬರ (25) ಎಂಬುವವರಿಗೆ ಕಾಲು ಮುರಿದಿದ್ದು, ಹೆಚ್ಚಿನ ಚಿಕಿತ್ಸೆಗೆ ತಾವರಗೇರಾ ಆಸ್ಪತ್ರೆಗೆ ದಾಖಲಿಸಿದ್ದಾರೆ. ಕುಷ್ಟಗಿಯಲ್ಲಿ …

Read More »
error: Content is protected !!