Tuesday , September 17 2024
Breaking News
Home / Nagaraj M (page 4)

Nagaraj M

ಇಂದು ಮುದಗಲ್ಲಿಗೆ ಜೆಡಿಎಸ್ ರಾಜ್ಯಾಧ್ಯಕ್ಷ  ಸಿ ಎಂ ಇಬ್ರಾಹಿಂ

ನಾಗರಾಜ ಎಸ್ ಮಡಿವಾಳರ : ಮುದಗಲ್ : ಬುಧವಾರ ಪಟ್ಟಣದಕ್ಕೆ ಜೆಡಿಎಸ್ ರಾಜ್ಯಾಧ್ಯಕ್ಷ ಸಿ ಎಂ ಇಬ್ರಾಹಿಂ ಆಗಮಿಸಲಿದ್ದಾರೆ ಎಂದು ಜೆಡಿಎಸ್ ಘಟಕಾಧ್ಯಕ್ಷ  ಅಮಿರ್ ಬೇಗ ಉಸ್ತಾದ್ ಮಾಹಿತಿ ನೀಡಿದರು. ಪತ್ರಿಕೆಯೊಂದಿಗೆ ಮಾತನಾಡಿದ ಅವರು ಜಾತ್ಯತೀತ ಜನತಾದಳ ದಿಂದ ಬುಧವಾರ ಸಂಜೆ 4 ಗಂಟೆಗೆ ಲಿಂಗಸಗೂರು ತಾಲೂಕಾ ಮಟ್ಟದ ಅಲ್ಪಸಂಖ್ಯಾತರ ಸಮಾವೇಶ  ಹಾಗೂ ಪಕ್ಷ ಸೇರ್ಪಡೆ ಕಾರ್ಯಕ್ರಮ ಮುದಗಲ್ ಪಟ್ಟಣದ ರಂಗಮಂದಿರ ಆವರಣದಲ್ಲಿ ನಡೆಯಲಿದ್ದು ಕಾರ್ಯಕ್ರಮಕ್ಕೆ ಜೆಡಿಎಸ್ ರಾಜ್ಯಾಧ್ಯಕ್ಷ ಸಿ …

Read More »

ಮಾಜಿ ಶಾಸಕರ ಭ್ರಷ್ಟಾಚಾರದಲ್ಲಿ ಹಾಲಿ ಶಾಸಕರ ಪಾಲೇಷ್ಟು : ಎಚ್ ಬಿ ಮುರಾರಿ ಆರೋಪ 

ನಾಗರಾಜ್ ಎಸ್ ಮಡಿವಾಳರ ಮುದಗಲ್ : ಮಾಜಿ ಶಾಸಕರ ಭ್ರಷ್ಟಾಚಾರದಲ್ಲಿ ಹಾಲಿ ಶಾಸಕರ ಪಾಲೇಷ್ಟು ಎಂದು ರಾಜೀವ್ ಗಾಂಧಿ ರಾಜ್ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾ ಸಹಯೋಜಕ ಎಚ್ ಬಿ ಮುರಾರಿ ಹೇಳಿದರು. ಸಮೀಪದ ನಾಗಲಾಪುರ ಗ್ರಾಮದಲ್ಲಿ ಭಾರತ್ ಜೋಡೋ ಯಾತ್ರೆಯ  ಭಾಷಣದಲ್ಲಿ ಮಾತನಾಡಿದ ಅವರು ಲಿಂಗಸಗೂರು ಕ್ಷೇತ್ರ ರಾಜಕಾರಣಿಗಳ ಕಾರ್ಖಾನೆಯಾಗಿದೆ ತಾಲೂಕಿನ ಅಮ್ಮ ಬಸರಾಜೇಶ್ವರಿ ಗೆಜ್ಜೆಲ ಗಟ್ಟಿ, ಬಸವರಾಜ್ ಪಟೇಲ್ ಅನ್ವರಿ, ಕುಷ್ಟಗಿ ಶಾಸಕ ಅಮರೇಗೌಡರ ಹಾದಿಯಾಗಿ ಲಿಂಗಸಗೂರು …

Read More »

ಲಿಂಗಸಗೂರನ್ನ ಭ್ರಷ್ಟ ರಾಜಕಾರಣಿಗಳಿಂದ ಮುಕ್ತಿ ಗೊಳಿಸಿ : ಗಾಣದಾಳ

ನಾಗರಾಜ್ ಎಸ್ ಮಡಿವಾಳರ ಮುದಗಲ್ : ಲಿಂಗಸಗೂರು ವಿಧಾನಸಭಾ ಕ್ಷೇತ್ರವನ್ನ ಭ್ರಷ್ಟ ರಾಜಕಾರಣಿಗಳಿಂದ ಮುಕ್ತ ಗೊಳಿಸಿ ಎಂದು ಆಮ್ ಆದ್ಮಿ ಪಕ್ಷದ ಸೇವಕಾಂಕ್ಷಿ  ಶಿವಪುತ್ರ ಗಣದಾಳ ಹೇಳಿದರು. ಬುಧವಾರ ಪಟ್ಟಣದಲ್ಲಿ ಜನಸಂಪರ್ಕ ಕಾರ್ಯಕ್ರಮ ನಡೆಸಿ ನಂತರ ಪತ್ರಿಕೆಯೊಂದಿಗೆ ಮಾತನಾಡಿದ ಅವರು ಲಿಂಗಸಗೂರು ಕ್ಷೇತ್ರದಲ್ಲಿ  ಸಾವಿರಾರು ಕೋಟಿರೂಪಾಯಿಗಳ  ಭ್ರಷ್ಟಾಚಾರ ನಡೆಯುತ್ತಿರುವುದು ರಾಜ್ಯ ಮಟ್ಟದಲ್ಲಿ ಸುದ್ದಿಯಾಗಿ ಆಡಳಿತದ ನಡೆಸಿದ ಎರೆಡು ಪಕ್ಷಗಳ ನಾಯಕರ ಬಣ್ಣ ಬಯಲಾಗಿದೆ ಇದರಿಂದ ಕ್ಷೇತ್ರದ ಜನ ಎಚ್ಚತ್ತುಕೊಂಡಿದ್ದಾರೆ ಇಂತಹ …

Read More »

ಹೂಲಗೇರಿ ಆಪ್ತ ಸಹಾಯಕರಾಗಿ ರಾಘವೇಂದ್ರ ಕುದರಿ

ನಾಗರಾಜ್ ಎಸ್ ಮಡಿವಾಳರ ಮುದಗಲ್ : ಲಿಂಗಸಗೂರು ಶಾಸಕ ಡಿ ಎಸ್ ಹೂಲಗೇರಿರವರ ಆಪ್ತ ಶಾಸಕರಾಗಿ ರಾಘವೇಂದ್ರ ಕುದರಿರನ್ನ  ನೇಮಕ ಮಾಡಿ ಶಾಸಕ ಹೂಲಗೇರಿ ರವರು  ಪತ್ರಿಕಾಪ್ರಕಟಣೆ ಹೊರಡಿಸಿದ್ದಾರೆ. ಹಲವು ವರ್ಷಗಳಿಂದ ಕಾಂಗ್ರೆಸ್  ಕಾರ್ಯಕರ್ತರಾಗಿದ್ದ ರಾಘವೇಂದ್ರ ಕುದರಿ ಪಕ್ಷ ಸಂಘಟನೆಯಲ್ಲಿ  ತೊಡಗಿಸಿಕೊಂಡಿದ್ದರು ಇದೀಗ ಅವರನ್ನು ಲಿಂಗಸಗೂರು ಶಾಸಕರು ತಮ್ಮ ಆಪ್ತ ಸಹಾಯಕರನ್ನಾಗಿ ನೇಮಿಸಿಕೊಂಡಿರುವುದು ಕಾಂಗ್ರೆಸ್  ಕಾರ್ಯಕರ್ತರಲ್ಲಿ ಹೊಸ ಹುಮ್ಮಸ್ಸು ಮೂಡಲು ಕಾರಣವಾಗಲಿದೆ ಎಂದು ಕಾಂಗ್ರೆಸ್ ಕಾರ್ಯಕರ್ತರು ಪತ್ರಿಕೆಯೊಂದಿಗೆ ತಮ್ಮ ಅಭಿಪ್ರಾಯ …

Read More »

ಮುದಗಲ್ ಪೊಲೀಸರ ಭರ್ಜರಿ ಬೇಟೆ : ಮೂವರ ಬಂಧನ,12.50ಲಕ್ಷ ಮೌಲ್ಯದ ಬಂಗಾರ ವಶ

ನಾಗರಾಜ್ ಎಸ್ ಮಡಿವಾಳರ ಮುದಗಲ್ : ಕಳೆದ ಅಕ್ಟೋಬರ್ 10ರಂದು ಪಟ್ಟಣದ ಶ್ರೀ ರಾಮಲಿಂಗೇಶ್ವರ ಕಾಲೋನಿ ಹತ್ತಿರದ ಜೆಕೆ ಜೂವೇಲರಿಯ ಮಾಲೀಕ ಶ್ರವಣ ಜೈನ್ ತಂದೆ ಪದಮ್ ಜೈನ್ ರವರು ಅಂಗಡಿಯಿಂದ ಮನೆಗೆ ತೆರಳುವಾಗ ಕಾಲೋನಿಯ ಕಮಾನಿನ ಬಳಿ  ಕಣ್ಣಿಗೆ ಕಾರದ ಪುಡಿ ಎರಚಿ 13ಲಕ್ಷ ಮೌಲ್ಯದ 300 ಗ್ರಾಂ  ಬಂಗಾರ ದೋಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮುದಗಲ್ ಪೊಲೀಸರು ಮೂವರನ್ನ ಬಂಧಿಸಿ 12.50ಲಕ್ಷ  ರೂಪಾಯಿ ಮೌಲ್ಯದ  256.50 ಗ್ರಾಂ ಬಂಗಾರವನ್ನ …

Read More »

ತಾವರಗೇರಾ : ಯುವಕನ ಆತ್ಮಹತ್ಯೆ

ಎನ್ ಶಾಮಿದ್ ತಾವರಗೇರಾ ತಾವರಗೇರಾ : ಸಮೀಪದ ಜುಮಲಾಪುರ ಗ್ರಾಮದ ಯುವಕನೊಬ್ಬ ಕೆರೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಜರುಗಿದೆ.   ಗ್ರಾಮದ ಕೆರೆಯ ಪಕ್ಕದಲ್ಲಿ ಅನುಮಾನಸ್ಪದವಾಗಿ ಮೊಬೈಲ್ ಹಾಗೂ ಚಪ್ಪಲಿಗಳನ್ನ ಕಂಡ ಸ್ಥಳೀಯರು ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ ಕೂಡಲೇ ಸ್ಥಳಕ್ಕೆ ದಾವಿಸಿದ ಪೊಲೀಸರು ತಲಾಶ್ ನಡೆಸಿದಾಗ ಯುವಕ ಆತ್ಮಹತ್ಯೆ ಮಾಡಿಕೊಂಡರುವುದು ತಿಳಿದು ಬಂದಿದೆ. ಮೃತ ದುರ್ದೈವಿಯನ್ನ ಮಹೇಶ್ ಈರಪ್ಪ ಬಾದವಾಡಗಿ (28) ಎಂದು ಗುರುತಿಸಲಾಗಿದ್ದು ಈ ಪ್ರಕರಣದ ಕುರಿತು …

Read More »

ಮುದಗಲ್ : ಮುಖ್ಯಧಿಕಾರಿಯಾಗಿ ಪರಶುರಾಮ್ ನಾಯಕ್ ಅಧಿಕಾರ ಸ್ವೀಕಾರ

  ನಾಗರಾಜ ಎಸ್ ಮಡಿವಾಳರ್  ಮುದಗಲ್ : ಪಟ್ಟಣದ ಪುರಸಭೆ ಮುಖ್ಯಧಿಕಾರಿಯಾಗಿ ಪರಶುರಾಮ ನಾಯಕ್ ಅಧಿಕಾರ ಸ್ವೀಕಾರ ಮಾಡಿದರು.  ಪುರಸಭೆ ಮುಖ್ಯಧಿಕಾರಿ ಮರಿಲಿಂಗಪ್ಪ ರನ್ನ ವರ್ಗಾವಣೆ ಮಾಡಿ ರವರ ಜಾಗಕ್ಕೆ ಕುರಗೋಡು ಪುರಸಭೆಯ ಮುಖ್ಯಧಿಕಾರಿ ಪರಶುರಾಮ ರವರನ್ನ ನೇಮಿಸಿ ನಗರಾಭಿವೃದ್ಧಿ ಇಲಾಖೆಯ ಸರಕಾರದ ಅಧೀನ ಕಾರ್ಯದರ್ಶಿ ಟಿ ಮಂಜುನಾಥ್ ಆದೇಶ ಹೊರಡಿಸಿದ್ದ ಹಿನ್ನೆಲೆಯಲ್ಲಿ ಶುಕ್ರವಾರ ಪುರಸಭೆ ಮುಖ್ಯಧಿಕಾರಿ ಮರಿಲಿಂಗಪ್ಪ ರವರು ಪರಶುರಾಮ್ ನಾಯಕ್ ರವರಿಗೆ ಹೂ ಮಾಲೆ ಹಾಕಿ ಸ್ವಾಗತಿಸುವ …

Read More »

ದಿವಾಕರ ಪೂಜಾರ್ ವಯೋ ನಿವೃತ್ತಿ ಕಾರ್ಯಕ್ರಮ

ನಾಗರಾಜ್ ಎಸ್ ಮಡಿವಾಳರ ಮುದಗಲ್ : ಪಟ್ಟಣದ ಬಾಲಕರ ಪ್ರೌಢ ಶಾಲಾ ಉಪ ಪ್ರಾಂಶುಪಾಲ ದಿವಾಕರ ಪೂಜಾರ್ ರವರ ವಯೋ ನಿವೃತ್ತಿ ಕಾರ್ಯಕ್ರಮ ಜರುಗಿತು. ಸ್ಥಳೀಯ ಜೂನಿಯರ್ ಕಾಲೇಜಿನಲ್ಲಿ ನಡೆದ ದಿವಾಕರ ಪೂಜಾರ್ ರವರ ವಯೋ ನಿವೃತ್ತಿ ಕಾರ್ಯಕ್ರಮದಲ್ಲಿ ಮಾತನಾಡಿದ ಬಾಲಕಿಯರ ಪ್ರೌಢ ಶಾಲೆಯ ಮುಖ್ಯಗುರುಗಳಾದ ಬಾಲಚಂದ್ರ ಡಿಕೆ ಪೂಜಾರ್ ರವರು ಒಬ್ಬ ಮಾದರಿ ಶಿಕ್ಷಕ ಹಾಗೂ ಸರಳಜೀವಿ ನೂರಾರು ವಿದ್ಯಾರ್ಥಿಗಳಿಗೆ ಆದರ್ಶ ಶಿಕ್ಷಕಗಾಗಿ ವಿದ್ಯಾರ್ಥಿಗಳ ಪ್ರೀತಿಗೆ ಪಾತ್ರರಾಗಿದ್ದಾರೆ,ಪ್ರಸ್ತುತ ಶಿಕ್ಷಣ …

Read More »

ಮುದಗಲ್ : ಪುರಸಭೆ ಮುಖ್ಯಧಿಕಾರಿ ಮರೀಲಿಂಗಪ್ಪ ವರ್ಗಾವಣೆ

ನಾಗರಾಜ್ ಎಸ್ ಮಡಿವಾಳರ ಮುದಗಲ್ : ಮುದಗಲ್ ಪುರಸಭೆ ಮುಖ್ಯಧಿಕಾರಿ ಮರಿಲಿಂಗಪ್ಪ ರನ್ನ ವರ್ಗಾವಣೆ ಮಾಡಿ ಸರಕಾರ ಆದೇಶ ಹೊರಡಿಸಿದೆ. ಮರಿಲಿಂಗಪ್ಪ ರವರ ಜಾಗಕ್ಕೆ ಸಾರ್ವಜನಿಕ ಹಾಗೂ ಆಡಳಿತಾತ್ಮಕ ಹಿತ ದೃಷ್ಟಿಯಿಂದ ಮುದಗಲ್ ಪುರಸಭೆಗೆ ಮುಖ್ಯಾಧಿಕಾರಿಯಾಗಿ ಕುರಗೋಡು ಪುರಸಭೆಯ ಮುಖ್ಯಧಿಕಾರಿ ಪರಶುರಾಮ ರವರನ್ನ ನೇಮಿಸಿ ತಕ್ಷಣದಿಂದ ಜಾರಿಗೆ ಬರುವಂತೆ ದಿ 27.10.2022ರಂದು ನಗರಾಭಿವೃದ್ಧಿ ಇಲಾಖೆಯ ಸರಕಾರದ ಅಧೀನ ಕಾರ್ಯದರ್ಶಿ ಟಿ ಮಂಜುನಾಥ್  ಆದೇಶ ಹೊರಡಿಸಿದ್ದಾರೆ.

Read More »

ಗೆಳೆಯನ ಜೀವ ಉಳಿಸಲು ಯುವಕರಿಂದ ದೇಣಿಗೆ ಸಂಗ್ರಹ

ನಾಗರಾಜ್ ಎಸ್ ಮಡಿವಾಳರ ಮುದಗಲ್ : ಯುವಕರ ಗುಂಪೊಂದು ತಮ್ಮ ಗೆಳೆಯನ ಜೀವ ಉಳಿಸಲು ಜನರಿಂದ ದೇಣಿಗೆ ಸಂಗ್ರಹಣೆ ಮಾಡಿ ಆಸ್ಪತ್ರೆಗೆ ಕಳಿಹಿಸುವ ಮೂಲಕ ಯುವಕರು ಮಾನವೀಯತೆ ಮೆರದಿದ್ದಾರೆ.  ಪಟ್ಟಣದ ನಿವಾಸಿಯಾದ ಬಸವರಾಜ್ ಎಂಬುವತನಿಗೆ ಕೈ,ತಲೆ,ಕಾಲು,ಬಾಯಿ ಗೆ ಪಾರ್ಶ್ವವಾಯು ಆಗಿ ಗಂಭೀರ ಸ್ಥಿತಿಯಲ್ಲಿಯಲ್ಲಿದ್ದು ಬಡ ಕುಟುಂಬ ಹಾಗೂ ಚಿಕ್ಕ ವಯಸ್ಸಿನಲ್ಲಿ  ತಂದೆ – ತಾಯಿಯನ್ನ ಕಳೆದುಕೊಂಡ ಬಸವರಾಜನಿಗೆ ಗೆಳೆಯರೇ ತಂದೆ-ತಾಯಿಯಾಗಿ ನಿಂತು  ಚಿಕಿತ್ಸೆಗಾಗಿ ಯುವಕರೆಲ್ಲ ಸೇರಿ ಪಟ್ಟಣದಲ್ಲಿ ದೇಣಿಗೆ ಸಂಗ್ರಹಣೆ …

Read More »
error: Content is protected !!